ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ನೆಬ್ಬೂರು ಭಾಗವತರ ಅಭಿಮಾನಿಗಳಿಂದ ಪ್ರತಿಷ್ಠಾನ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಡಿಸೆ೦ಬರ್ 20 , 2014
ಡಿಸೆ೦ಬರ್ 20, 2014

ನೆಬ್ಬೂರು ಭಾಗವತರ ಅಭಿಮಾನಿಗಳಿಂದ ಪ್ರತಿಷ್ಠಾನ

ಶಿರಸಿ : ಸಮದ್ಧ ಕಲೆಯಾದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಎಪ್ಪತ್ತೊಂಬತ್ತರ ಇಳಿವಯಸ್ಸಿನಲ್ಲಿಯೂ ಸಕ್ರಿಯವಾಗಿರುವ ಹಿರಿಯ ಹಿಮ್ಮೇಳ ಕಲಾವಿದ ನೆಬ್ಬೂರು ನಾರಾಯಣ ಭಾಗವತ ಅವರ ಅಭಿಮಾನಿಗಳು ಈಗ ಸಾರ್ವಜನಿಕ ಪ್ರತಿಷ್ಠಾನವನ್ನು ರಚಿಸಿಕೊಂಡಿದ್ದಾರೆ. ಕಲಾ ಕ್ಷೇತ್ರಕ್ಕೆ ಸಂಬಂಧಿಸಿದ ನಾನಾ ಕಾರ್ಯಚಟುವಟಿಕೆಗಳನ್ನು ಪ್ರತಿಷ್ಠಾನದ ಮೂಲಕ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್.ಜಿ.ಹೆಗಡೆ, ಅಧ್ಯಕ್ಷ ಜಿ.ಎನ್.ಹೆಗಡೆ ಹಾವಳಿಮನೆ ಹಾಗೂ ಉಪಾಧ್ಯಕ್ಷ ಆರ್.ಡಿ.ಹೆಗಡೆ ಜಾನ್ಮನೆ ಶುಕ್ರವಾರ ಇಲ್ಲಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಯಕ್ಷಗಾನ ಕಲೆಗೆ ಅವಿರತ ಕೊಡುಗೆ ನೀಡುತ್ತಿರುವವರಲ್ಲಿ ಪ್ರಮುಖರಾದ ನೆಬ್ಬೂರು ನಾರಾಯಣ ಭಾಗವತರು ಸುಮಧುರ ಭಾಗವತಿಕೆಯ ಮೂಲಕ ಯಕ್ಷಗಾನ ಪ್ರೇಮಿಗಳಿಗೆ ಕಲೆಯ ರಸದೌತಣ ನೀಡುತ್ತಿದ್ದಾರೆ. ತಮ್ಮ ಯಕ್ಷಗಾನ ಗಾಯನದಿಂದ ದೇಶ ವಿದೇಶಗಳಲ್ಲಿಯೂ ಕಲಾಸಕ್ತರ ಶ್ಲಾಘನೆಗೆ ಪಾತ್ರರಾಗಿದ್ದು ನಮ್ಮ ಭಾಗಕ್ಕೆ ಹೆಮ್ಮೆಯ ಕಲಾವಿದರಾಗಿ ಕೀರ್ತಿ ತಂದಿದ್ದಾರೆ.

ನೆಬ್ಬೂರು ಭಾಗವತರು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶೇಣಿ ಮತ್ತು ದೇರಾಜೆ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಅನೇಕ ಸಂಘಸಂಸ್ಥೆಗಳವರು ಅವರನ್ನು ಗೌರವಿಸುತ್ತಿದ್ದಾರೆ. ಯಕ್ಷಗಾನ ಕಲಾಕ್ಷೇತ್ರಕ್ಕೆ ಅವರು ಸಲ್ಲಿಸುತ್ತಿರುವ ಸೇವೆಯ ದ್ಯೋತಕವಾಗಿ ಅವರ ಹೆಸರಿನಲ್ಲಿ ಜಾನ್ಮನೆಯನ್ನು ಕೇಂದ್ರ ಸ್ಥಳವಾಗಿಟ್ಟುಕೊಂಡು ಪ್ರತಿಷ್ಠಾನ ರಚಿಸಲಾಗಿದೆ ಎಂದು ಆರ್.ಡಿ.ಹೆಗಡೆ ತಿಳಿಸಿದರು.

ನಿರಂತರ ಕಾರ್ಯ ಇಂಥ ಮೇರು ಕಲಾವಿದರಾದ ನೆಬ್ಬೂರು ಭಾಗವತ ದಂಪತಿಗೆ ಸನ್ಮಾನದ ಗೌರವಾರ್ಪಣೆಯೊಂದಿಗೆ ಸ್ವರ್ಣವಲ್ಲೀ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರತಿಷ್ಠಾನವು ಜನವರಿ ಮಧ್ಯಭಾಗದಲ್ಲಿ ಉದ್ಘಾಟನೆಗೊಳ್ಳಲಿದೆ. ನಂತರ ವರ್ಷವಿಡೀ ನಾನಾ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರಲು ಉದ್ದೇಶಿಸಲಾಗಿದೆ.

ನೆಬ್ಬೂರು ಭಾಗವತರ ಹೆಸರಿನಲ್ಲಿ ಪ್ರಶಸ್ತಿ ನೀಡುವದಕ್ಕೆ ನಿರ್ಧರಿಸಲಾಗಿದೆ. ಯಕ್ಷಗಾನ ತರಬೇತಿ ಕೇಂದ್ರ ಸ್ಥಾಪನೆ, ಸಾಂಸ್ಕೃತಿಕ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ, ಯಕ್ಷಗಾನ ಸಂಗೀತ ನಾಟಕ, ನತ್ಯ ಕಲಾಕ್ಷೇತ್ರದ ಹಿರಿಯ ಕಲಾವಿದರಿಗೆ ಗೌರವಾರ್ಪಣೆ, ಸಂಶೋಧನೆ ಮತ್ತು ದಾಖಲೀಕರಣದ ಕಾರ್ಯಕ್ಕೆ ಪ್ರತಿಷ್ಠಾನ ತೀರ್ಮಾನಿಸಿದೆ ಎಂದು ಪದಾಧಿಕಾರಿಗಳು ವಿವರ ನೀಡಿದರು.

ಪ್ರತಿಷ್ಠಾನದ ಕಾರ್ಯದರ್ಶಿ ರವಿ ಹೆಗಡೆ ಕವಲಕುಳಿ, ಸದಸ್ಯ ರಾಜಾರಾಮ ಹೆಗಡೆ ಬೊಪ್ಪನಕೊಡ್ಲು ಉಪಸ್ಥಿತರಿದ್ದರು.

ಸಹಕಾರಕ್ಕೆ ಮನವಿ ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನವು ತರಬೇತಿ ಕೇಂದ್ರ ಸ್ಥಾಪನೆ, ರಂಗ ಮಂದಿರ ನಿರ್ಮಾಣ, ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ ಮುಂತಾದ ಗುರಿಗಳನ್ನು ಹೊಂದಿದ್ದು ಈಗಾಗಲೇ ಅನೇಕರು ಪ್ರತಿಷ್ಠಾನಕ್ಕೆ ತನುಮನಧನ ನೆರವು ನೀಡುತ್ತಿದ್ದಾರೆ. ಸಮಾಜದ ಸಹದಯಿಗಳು ಈ ದಿಸೆಯಲ್ಲಿ ಪ್ರತಿಷ್ಠಾನದೊಂದಿಗೆ ಕೆಜೋಡಿಸಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿಕೊಂಡರು.



ಕೃಪೆ : http://vijaykarnataka.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ